ಪೊಲೀಸರು, ಆಶಾ ಕಾರ್ಯಕರ್ತೆಯರು, ಪೌರ ಕಾರ್ಮಿಕರಿಗೆ  7000 ಆಯುರ್ವೇದ ರೋಗ ನಿರೋಧಕ ಔಷಧಿ ಕಿಟ್ ಗಳನ್ನು ಉಚಿತ ವಿತರಣಿ; ·        ರೋಗ ನಿರೋಧಕ ಶಕ್ತಿ ವೃದ್ಧಿಗೆ ಆಯುಷ್ ಮಾರ್ಗಸೂಚಿ ಪಾಲಿಸುವಂತೆ ಪ್ರಧಾನಿ ಮೋದಿ ಆಶಯ ಈಡೇರಿಸುತ್ತಿರುವ ಆಯುರ್ವೇದ ವೈದ್ಯ ಡಾ. ವಿನಯ್ *      ಬೆಂಗಳೂರು ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಮೈಸೂರಿನ ಜಿಲ್ಲಾ ಪೊಲೀಸ್ ಅಧೀಕ್ಷಕ ಸಿ.ಬಿ.ರಿಷ್ಯಂತ್, ಅವರನ್ನು ಭೇಟಿ ಮಾಡಿ   ವಿತರಣಿ   ಬೆಂಗಳೂರು, ಮೇ 18; ಕೊರೋನಾ ವೈರಸ್ ಜೊತೆಯಲ್ಲಿಯೇ ಆರ್ಥಿಕ ಚಟುವಟಿಕೆ ನಡೆಸುವ, ಬದುಕು ಸಾಗಿಸುವ ಕಲೆಯನ್ನು ರೂಢಿಸಿಕೊಳ್ಳಬೇಕೆಂದು ಪ್ರಧಾನಿ ನರೇಂದ್ರ ಮೋದಿ ನೀಡಿದ ಕರೆಯನ್ನು ಪಾಲಿಸುತ್ತಿರುವ ನಗರದ  ಆಯುರ್ವೇದ ವೈದ್ಯ ಡಾ.ವಿನಯ್.ಎಸ್.ಸಿಂಗರಾಜಪುರ, ಸೋಂಕಿನ ವಿರುದ್ಧ ಜನ ಸಾಮಾನ್ಯರ ರಕ್ಷಣೆಗಾಗಿ ಜೀವ ಪಣಕ್ಕಿಟ್ಟು ಹೋರಾಡುತ್ತಿರುವ ಪೊಲೀಸರು, ಆಶಾ ಕಾರ್ಯಕರ್ತೆಯರು, ಪೌರ ಕಾರ್ಮಿಕರಿಗೆ  7000 ಆಯುರ್ವೇದ ರೋಗ ನಿರೋಧಕ ಔಷಧಿ ಕಿಟ್ ಗಳನ್ನು ಉಚಿತವಾಗಿ ವಿತರಿಸುತ್ತಿದ್ದಾರೆ.   ಎಲ್ಲಾ ಸಮಸ್ಯೆಗಳಿಗೂ “ಆಯುರ್ವೇದವೆಂಬ ಆಪತ್ಬಾಂಧವ” ಎನ್ನುವ ಪರಿಕಲ್ಪನೆಯಲ್ಲಿ ಹಾಗೂ ಆಯುಷ್ ಮಾರ್ಗಸೂಚಿಗಳನ್ನು ಪಾಲಿಸುವಂತೆ ಪ್ರಧಾನಿ ಮೋದಿ ನೀಡಿರುವ ಕರೆಯನ್ನು ಪಾಲಿಸುತ್ತಿದ್ದಾರೆ. ಬೆಂಗಳೂರು ಮತ್ತು ಮೈಸೂರಿನಲ್ಲಿ “ಆಯುರ್ವೇದದ  ರೋಗನಿರೋಧಕ ಶಕ್ತಿ ವೃದ್ದಿಸುವ ಹಾಗು ವೈರಸ್ ನಿಯಂತ್ರಣ  ಔ಼ಷಧಿ ಕಿಟ್” ಗಳನ್ನು ವಿತರಣೆ ಮಾಡುತ್ತಿದ್ದಾರೆ.     ಡಾ.ವಿನಯ್ ಅವರ ಜತೆ ಸಮಾನ ಮನಸ್ಕ ಸ್ನೇಹಿತರಾದ ಕನ್ನಡ ಟೈಮ್ಸ್ ಮುಖ್ಯಸ್ಥರಾದ  ಹರೀಶ್, ವಕೀಲರಾದ ಹರೀಶ್ ಸಹ ಕೈ ಜೋಡಿಸಿದ್ದಾರೆ. ತಮ್ಮ ಸ್ನೇಹಿತರ ಬಳಗದೊಂದಿಗೆ ಬೆಂಗಳೂರು ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಮೈಸೂರಿನ ಜಿಲ್ಲಾ ಪೊಲೀಸ್ ಅಧೀಕ್ಷಕ ಸಿ.ಬಿ.ರಿಷ್ಯಂತ್, ಅವರನ್ನು ಭೇಟಿ ಮಾಡಿ, ಈ ಔಷಧದ ಮಹತ್ವದ ಬಗ್ಗೆ ಮಾಹಿತಿ ನೀಡಿ ಔಷಧಿ ಕಿಟ್ ಗಳನ್ನು  ಹಂಚಿದ್ದಾರೆ. ಸೋಂಕಿನ ಹಾಟ್ ಸ್ಪಾಟ್ ಆಗಿದ್ದ ನಂಜನಗೂಡಿನ ಡಿ.ವೈ.ಎಸ್.ಪಿ ಪ್ರಭಾಕರ್ ಶಿಂಧೆ ಅವರ ನೆರವನಿಂದ ನೂರಾರು ಕಿಟ್ ಗಳನ್ನು ವಿತರಣೆ ಮಾಡಿದ್ದಾರೆ. ಬಿಬಿಎಂಪಿ ಸಿಬ್ಬಂದಿ, ಪೌರ ಕಾರ್ಮಿಕರು, ಆಶಾ ಕಾರ್ಯಕರ್ತೆಯರಿಗೂ ಸಹ ಕಿಟ್ ಗಳನ್ನು ಹಂಚಿದ್ದಾರೆ.    ಆಯುಷ್ ಸಂಸ್ಥೆಯಿಂದ ಪ್ರಮಾಣೀಕರಿಸಲ್ಪಟ್ಟ ಆಂಟಿ ವೈರಸ್ ಮತ್ತು ಇಮ್ಯೂನ್ ಬೂಸ್ಟರ್ ಗಳನ್ನು [Anti Viral and Immune Booster] ಗಳನ್ನು ಆಧಾರವಾಗಿಟ್ಟುಕೊಂಡು, ಕೇಂದ್ರದ ಆಯುಷ್ ಇಲಾಖೆಯ ಮಾರ್ಗಸೂಚಿಯನ್ವಯ ಶಾಸ್ತ್ರೀಯ ರೀತಿಯಲ್ಲಿ ಈ ಕಿಟ್ ಗಳನ್ನು ಡಾ. ವಿನಯ್ ಸಿದ್ಧಪಡಿಸಿದ್ದಾರೆ. ಶ್ವಾಸಕೋಶದ ತೊಂದರೆಗಳಿಗೆ ಸಾವಿರಾರು ವರ್ಷಗಳ ಹಿಂದೆ ಋಷಿಮುನಿಗಳು ತಮ್ಮ ಗ್ರಂಥಗಳಲ್ಲಿ  ಉಲ್ಲೇಖಿಸಿರುವ ಸೂತ್ರಗಳನ್ವಯ ಕಿಟ್ ಗಳನ್ನು ಸಿದ್ಧಪಡಿಸಿದ್ದಾರೆ.    ವೈದ್ಯರ ಜೊತೆ ಪೊಲೀಸ್, ಪೌರಕಾರ್ಮಿಕರು, ಆಶಾಕಾರ್ಯಕರ್ತರು ತಮ್ಮ ಆರೋಗ್ಯದ ಕಡೆ ಗಮನಹರಿಸದೇ ಸೋಂಕು ನಿಯಂತ್ರಣಕ್ಕಾಗಿ ಕೆಲಸ ಮಾಡುತ್ತಿದ್ದು, ಈ ಸಮುದಾಯದ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಉದ್ದೇಶದಿಂದ ಲಾಕ್ ಡೌನ್ ಸಂದರ್ಭದಲ್ಲಿ ಕಿಟ್ ಗಳನ್ನು ವಿತರಣೆ ಮಾಡಲಾಗುತ್ತಿದೆ ಎಂದು ಡಾ. ವಿನಯ್ ಹೇಳಿದ್ದಾರೆ.      ನಗರದ ಎನ್.ಆರ್.ಕಾಲೋನಿ “ವರಪ್ರದ ಆಯುರ್ವೇದಿಕ್ ಸೆಂಟರ್” ಮುನ್ನಡೆಸುತ್ತಿರುವ ಡಾ.ವಿನಯ್. ಎಸ್.ಸಿಂಗರಾಜಪುರ, ಮೂಲತಃ ನಾಡಿವೈದ್ಯ, ಪಂಚಕರ್ಮ, ಆಕ್ಯುಪಂಕ್ಚರ್ ವಿಭಾಗಗಳಲ್ಲಿ ಪರಿಣಿತಿ ಪಡೆದಿದ್ದಾರೆ. ಉಚಿತ ಶಿಬಿರಗಳನ್ನು ನಡೆಸಿ ಆಯುರ್ವೇದದ ಮಹತ್ವ ಸಾರುವ ನಿಟ್ಟಿನಲ್ಲೂ ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಹಲವು ಮಠ, ಮಂದಿರಗಳಲ್ಲಿ ನಿಯಮಿತವಾಗಿ ಈಗಲೂ ಉಚಿತ ನಾಡಿ ಶಾಸ್ತ್ರ ಮತ್ತು ಆಯುರ್ವೇದ ಶಿಬಿರಗಳನ್ನು ನಡೆಸುತ್ತಿದ್ದಾರೆ.     ಡಾ.ವಿನಯ್ : 6362690447

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s