Spiders On Mars: ಮಂಗಳ ಗ್ರಹದ ಮೇಲ್ಮೈ ಮೇಲೆ ಮೂಡಿರುವ ಜೇಡರಹುಳ ಆಕಾರದ ಆಕೃತಿಗಳ ಅಧ್ಯಯನ ನಡೆಸಲು ವಿಜ್ಞಾನಿಗಳು ಯತ್ನಿಸಿದ್ದಾರೆ. ಇವುಗಳನ್ನು Araneiforms ಎಂದು ಕರೆಯಲಾಗುತ್ತದೆ ಮತ್ತು ಇವು ಮಂಗಳ ಗ್ರಹದ ಮೇಲ್ಮೈ ಮೇಲಿರುವ ಎತ್ತರ ಮತ್ತು ತಗ್ಗು ಪ್ರದೇಶಗಳಿಂದ ನಿರ್ಮಾಣಗೊಳ್ಳುತ್ತವೆ. ಆದರೆ, ಇಂತಹ ಆಕೃತಿಗಳು ಭೂಮಿಯ ಮೇಲ್ಮೈ ಮೇಲೆ ಎಂದಿಗೂ ಕಂಡುಬಂದಿಲ್ಲ ಹಾಗೂ ಮಂಗಳನ ಮೇಲ್ಮೈ ಮೇಲೆ ಇವು ಹೇಗೆ ಮೂಡಿವೆ ಎಂಬುದು ಇದೀಗ ವಿಜ್ಞಾನಿಗಳಿಗೆ ಸವಾಲಾಗಿ ಪರಿಣಮಿಸಿದೆ.
ನವದೆಹಲಿ: Spiders On Mars – ಮಂಗಳ ಗ್ರಹದ ಮೇಲೆ ಜೀವನದ ಅಸ್ತಿತ್ವದ ಹುಡುಕಾಟದಲ್ಲಿ ಒಂದೆಡೆ ಕೆಲ ವಿಜ್ಞಾನಿಗಳು ನಿರತರಾಗಿದ್ದರೆ, ಇನ್ನೊಂದೆಡೆ ಮಂಗಳನ ಅಂಗಳದ ಕೆಲ ವಿಚಿತ್ರ ಸಂಗತಿಗಳ ಅಸ್ತಿತ್ವ ಕೂಡ ವಿಜ್ಞಾನಿಗಳ ಪಾಲಿಗೆ ರಹಸ್ಯ ಎಂದು ಸಾಬೀತಾಗುತ್ತಿದೆ. ಏತನ್ಮಧ್ಯೆ ಮಂಗಳ ಗ್ರಹದ ಮೇಲೆ ನಿರ್ಮಾಣಗೊಂಡಿರುವ ಜೇಡರ ಹುಳುವಿನಾಕೃತಿಗಳನ್ನು…